ಪೋಸ್ಟ್‌ಗಳು

balcony garden

ಇಮೇಜ್
ಪ್ರಿಯ ಓದುಗರಿಗೆ ನನ್ನ ನಮನಗಳು,  ನನ್ನ ಪುಟ್ಟ ಬಾಲ್ಕನಿಯ ಕೈ ತೋಟದಲ್ಲಿ ನಾನು ಬೆಳೆದ ಕೆಲವು ಗಿಡಮೂಲಿಕೆಗಳು, ತರಕಾರಿ ಮತ್ತು ಹೂವಿನ ಗಿಡಗಳ ಪರಿಚಯ ಮಾಡಿಕೊಡುತ್ತೇನೆ. ಅದಕ್ಕೂ ಮೊದಲು ಗಿಡಗಳ ಬಗ್ಗೆ ನನ್ನ ಅಭಿಪ್ರಾಯ ತಿಳಿಯಪಡಿಸುತ್ತೇನೆ. ನನ್ನ ದೈನಂದಿನ ಚಟುವಟಿಕೆಯು ನನ್ನ ಪುಟ್ಟ ಕೈ ತೋಟದಲ್ಲಿ ಚಿಲಿಪಿಲಿಗುಟ್ಟುವ ಪಕ್ಷಿಗಳ ಕಲರವವನ್ನು ಕೇಳುತ್ತ, ಆಗ ತಾನೆ ಉದಯಿಸಿದ ದಿವಾಕರನನ್ನು ನೋಡಿ ನಾಚಿ ನೃತ್ಯವಾಡುವ ಮಯೂರಿಯ ಸೌಂದರ್ಯವನ್ನು ನೆನೆಪಿಸಿಕೊಳ್ಳುತ್ತ, ಬಿಸಿ ಬಿಸಿ ಕಾಫಿಯನ್ನು ಸವಿಯುತ ನನ್ನ ಪುಟ್ಟ ಗಿಡಗಳನ್ನು ಆರೈಕೆ ಮಾಡುವುದರೊಂದಿಗೆ  ಆರಂಭವಾಗುತ್ತದೆ. ನಾನು ನನ್ನ ಹೆಚ್ಚಿನ ಸಮಯವನ್ನು ಬಾಲ್ಕನಿಯಲ್ಲಿ ಕಳೆಯುತ್ತೇನೆ. ಇದರಿಂದ ನನಗೆ ತುಂಬಾ ಸಂತೋಷವಾಗುತ್ತದೆ.  ಬಾಲ್ಯದಿಂದಲೂ ನನಗೆ ಗಿಡಗಳೆಂದರೆ ಸಾಕಷ್ಟು ಪ್ರೀತಿ.  ನನ್ನ ಕೈತೋಟದ ಅನುಭವದಿಂದ ನನಗೆ ಅನಿಸಿದ್ದೇನೆಂದರೆ ಮನುಷ್ಯರ ಹಾಗೆ ಗಿಡಗಳಿಗೂ ಭಾವನೆ ಇರುವುದೆಂದು ಹೇಗೆಂದರೆ ಗಿಡಗಳು ನಮ್ಮ ಭಾವನೆಗೆ ಸ್ಪಂದಿಸುತ್ತವೆ. ಗಿಡಗಳು ಸದಾ ನಗುವನ್ನು ಬೀರುತ್ತ ನಮಗೂ ಕೂಡ ಹಸನ್ಮುಖ ಬರಿಸುತ್ತವೆ. ಯಾವತ್ತಿಗೂ ತನ್ನ ವಿಶೇಷ ಗುಣಗಳನ್ನು ಕಳೆದುಕೊಳ್ಳುವುದಿಲ್ಲ. ತನ್ನ ಗೆಳೆತನವನ್ನು ಚಿಲಿಪಿಲಿ ಗುಟ್ಟುತ್ತ ಬಂದ ಗುಬ್ಬಿಯೊಂದಿಗೆ ಪ್ರಾರಂಭಿಸುತ್ತಾ, ಆಗಸದ ರವಿಯ ಹೊಂಗಿರಣವನ್ನು ನೆನೆದು ನೀಲಿ ಬರಿತ ಆಗಸವು ಮುಗಿಲಿನಿಂದ ಆವರಿಸಿ ಧರೆಗೆ ವರುಣನನ್ನು ಕರೆತರ...